About the Book: Vivaaha Bandhana
ಅನುರಾಧ ವೀಣೆ ಹಿಡಿದು ಕುಳಿತಳು. ಏನು ನುಡಿಸಲೀ., ಏನು ಹಾಡಲಿ ಎಂದು ಯೋಚಿಸಿದಳು. ಅಣ್ಣ ರಘುವಿಗೆ
ಬಹಳ ಇಷ್ಟವಾದ ದಾಸರ ಕೃತಿ ಈ ಪರಿಯ ಸೊಬಗು ಇನ್ನಾವ ದೇವರೊಳು ಕಾಣೆ, ಕಲ್ಯಾಣ ರಾಗದ ದೇವರನಾಮ.
ವೀಣೆಯ ನುಡಿತಕ್ಕೆ ದನಿಗೂಡಿಸಿ ಮಧುರವಾಗಿ ಹಾಡಿದಳು. ಶಶಿಧರ ಎದುರಿಗೆ ಕೂತು ನಸುನಗು
ಬೀರುತ್ತಿದ್ದ. ಆ ನಗುವಿನ ಭಾವ ಅನುರಾಧಳಿಗೆ ಹೊಳೆಯಿತು. ಬಹು ಕಾಲದಿಂದ ದೂರವಿದ್ದ ಎರಡು ಪ್ರೇಮಮಯ
ಹೃದಯಗಳು ಒಂದಾಗಲು ಹವಣಿಸುತ್ತಿತ್ತು.