About the Book: Natya Sudha
ಭಾರತೀಯ ಕಲೆಗಳಲ್ಲಿ ನೃತ್ಯಕ್ಕೆ ವಿಶಿಷ್ಟವಾದ ಸ್ಥಾನವಿದೆ. ನೃತ್ಯ ಪರಿಪೂರ್ಣವಾಗಿರುವಂತೆ
ಪ್ರಾಚೀನವಾದದ್ದು ಹೌದು. ಆದರೆ ಶಾಸ್ತ್ರೀಯವಾದ ಪರಂಪರೆಯನ್ನು ಅದರ ಶುದ್ಧ ಶೈಲಿಗೆ
ದಕ್ಕೆಯಾಗದಂತೆ, ಆಧುನಿಕ ಜನಜೀವನಕ್ಕೆ ಅನುಗುಣವಾಗಿ ರೂಪಿಸಿಕೊಳ್ಳಲು ಸಾಧ್ಯವೇ ಎಂಬುದು
ಪರಿಶೀಲನಾರ್ಹ ಪ್ರಶ್ನೆ. ಪ್ರಗತಿಯಿಲ್ಲದ ಸಂಪ್ರದಾಯ ಹೇಗೆ ಸ್ತಬವೋ, ಹಾಗೇಯೇ ಸಂಪ್ರದಾಯವಿಲ್ಲದ
ಪ್ರಗತಿ ಕೂಡ ನಿರಂಕುಶ. ಇದನ್ನೆಲ್ಲ ಮನಸ್ಸಿನಲ್ಲಿ ಇಟ್ಟುಕೊಂಡು ಯೋಚಿಸಿದರೇ ಈ ಕಾದಂಬರಿ ಈಗ
ಬರೆದಿದ್ದರೇ ಆರಂಭ ಮಾತ್ರವಲ್ಲ, ಮುಕ್ತಾಯವು ವಿಭಿನ್ನ ರೀತಿಯಲ್ಲಿ ಇರುತಿತ್ತೆನಿಸಿದೆ. ಕವಿತಾಳ
ಕಲೆಗೆ ಸರಿಯಾದ ನ್ಯಾಯ ಒದಗಿಸಿ ಕೊಡಲಿಲ್ಲ ಎನ್ನುವ ಗೊಂದಲ ನನ್ನಲ್ಲಿ ಇಂದಿಗೂ ಇದೆ.